ಜೀವನ ಎಂದರೆ ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ. ಜೀವನ ಒಂದು ಪುಸ್ತಕದಂತೆ ಕಷ್ಟ ಸುಖ ಎರಡೂ ಅದರ ಪುಟಗಳು ಎಲ್ಲ ಪುಟಗಳನ್ನು ಓದಿ ಅಥೈ೯ಸಿ ಕೊಂಡರಷ್ಟೇ ಸಾಥ೯ಕ ಬದುಕು ಸಾಗಿಸಲು ಸಾಧ್ಯ. ಈ ಸಾಗರದಂತ ಜೀವನದಲ್ಲಿ ಬರುವ ಅಡೆ ತಡೆಗಳನ್ನು ಎದುರಿಸಿ ಧೈರ್ಯ ದಿಂದ ಈಜಿ ದಡ ಸೇರಬೇಕು.

ಜೀವನದಲ್ಲಿ ನೀರಿಕ್ಷೆಗಳೇ ಜಾಸ್ತಿ ಆದರೆ ದೇವರ ಆಟದಲ್ಲಿ ಪರೀಕ್ಷೆ ಗಳೇ ಜಾಸ್ತಿ. ಜೀವನ ದಲ್ಲಿ ಎದುರಾಗುವ ಕಷ್ಟ ಗಳನ್ನು ಸವಾಲಾಗಿ ಸ್ವೀಕರಿಸಬೇಕು ಗೆದ್ದರೆ ಮುಂದೆ ಸಾಗಬಹುದು ಸೋತರೆ ಒಂದು ಒಳ್ಳೆಯ ಪಾಠ ಕಲಿತಂತಾಗುವುದು. ಜೀವನದಲ್ಲಿ ಕಾಯುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಎಲ್ಲವೂ ನಡೆಯುವುದು ಸಮಯಕ್ಕೆ ಸರಿಯಾಗಿ. ನಾವು ಪ್ರತಿಯೊಂದನ್ನು ನಮ್ಮ ಅನುಭವದಿಂದ ಕಲಿಯಬೇಕು. ಜೀವ ಚಿಕ್ಕದು ಜೀವನ ಬಹು ದೊಡ್ಡದು. ನಮ್ಮ ಗುರಿ ತಲುಪಲು ನಿರಂತರ ಹೋರಾಟ ಹಾಗೂ ಉತ್ತಮ ನಿಧಾ೯ರಗಳನ್ನು ಕೈಗೊಳ್ಳುವುದು ಬಹುಮುಖ್ಯವಾಗಿರುತ್ತದೆ ಹಾಗೆ ಜೀವನದಲ್ಲಿ ಯಾವ ವಸ್ತುವು ಸುಲಭವಾಗಿ ದೊರಕುವಂತಿರಬಾರದು ಯಾಕೆಂದರೆ ಸುಲಭವಾಗಿ ಸಿಕ್ಕ ವಸ್ತುವಿನ ಬೆಲೆ ನಮಗೆ ತಿಳಿಯುವುದಿಲ್ಲ.

ಜೀವನದಲ್ಲಿ ಬಯಸಿದ್ದೆಲ್ಲಾ ನಮಗೆ ದೊರಕುವುದಿಲ್ಲ. ನಮಗೆ ಎಷ್ಟು ಸಿಗುವುದು ಅಷ್ಟರಲ್ಲಿ ತ್ರಪ್ತಿ ಪಡಬೇಕು ನಾವು ನನ್ನದು ನನಗೆ ಎನ್ನುವುದು ನಶ್ವರ ಸ್ವಾರ್ಥ ಜೀವನಕ್ಕೆ ಬೆಲೆ ಇಲ್ಲ. ನಾವು ಎಷ್ಟು ದಿನ ಬದುಕಿದೆವು ಅನ್ನುವುದಕ್ಕಿಂತ ಹೇಗೆ ಬದುಕಿದೆವು ಎನ್ನುವುದು ಮುಖ್ಯ. ನಾವು ನಮ್ಮ ಕೈಲಾದಷ್ಟು ಪರೋಪಕಾರಿ ಧಾನ ಧರ್ಮ ಮಾಡಬೇಕು.

ಸವ೯ಜ್ಞರು ಹೇಳಿದ ಹಾಗೆ

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರ ರಿಂಗೆ

ಹಾಗೇ ಇನ್ನೊಂದು ಕಡೆ ಕವಿ ದಿನಕರ ದೇಸಾಯಿಯವರು ಹೇಳಿದ್ದಾರೆ

ಕೆಸರಿನಲ್ಲಿ ತಾವರೆ ಹುಟ್ಟಿ ಅದು ದೇವರ ಪಾದ ಸೇರಿ ತನ್ನ ಜನ್ಮವನ್ನು ಸಾಥ೯ಕ ಪಡಿಸಿಕೊಳ್ಳುತ್ತದೆಯೋ ಹಾಗೆ ನಾನು ನನ್ನ ಜೀವನವನ್ನು ಇನ್ನೊಬ್ಬರಿಗಾಗಿ ಮುಡುಪಾಗಿಡುತ್ತೇನೆ ಆದ್ದರಿಂದ ನಾನು ಸತ್ತ ಮೇಲೆ ನನ್ನ ಬೂದಿಯನ್ನು ಗಾಳಿಯಲ್ಲಿ ತೂರಿ ಬಿಡಿ ಇದರಿಂದ ಹೊಲಗದ್ದೆಗಳಲ್ಲಿ ಉತ್ತಮ ಪೈರು ಬೆಳೆಯಲು ಸಾಧ್ಯ

ಹೀಗೆ ಅನೇಕ ಉದಾಹರಣೆಗಳು ನಮ್ಮ ಕಣ್ಣುಂದೆ ಇದೆ ಹೀಗೆ ಸಾಧಿಸಿದ ಜೊತೆಗಿರದ ಜೀವಗಳು ನಮ್ಮ ನೆನಪಿನಲ್ಲಿ ಎಂದಿಗೂ ಜೀವಂತ.
ಒಟ್ಟಿನಲ್ಲಿ ನಾವು ಬದುಕಿದರೆ ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕಬೇಕು.

Vidya A Shetty – Beloor School Teacher